Prakash Rai`s `Oggarane` Shooting Mysore Photo Gallery Climax Shooting in Manasa Gangothri In Mysore .
ಒಗ್ಗರಣೆ ಹಾಕಾಯ್ತು
ಒಗ್ಗರಣೆ ಚಿತ್ರದ ಕೊನೆ ಹಂತದ ಚಿತ್ರೀಕರಣ ನಡೆಸಲು ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಂಡವು ಬೀಡು ಬಿಟ್ಟಿತ್ತು. ಪತ್ರಕರ್ತರು ಬೆಂಗಳೂರಿನಿಂದ ಶೂಟಿಂಗ್ ಜಾಗಕ್ಕೆ ಹೋದಾಗ ಸೂರ್ಯ ಕಾವೇರಿದ್ದ. ನಿರ್ದೇಶಕ,ನಟ ಪ್ರಕಾಶ್‌ರೈ ಮತ್ತು ಸ್ನೇಹ ಒಂದಾಗುವ ದೃಶ್ಯ. ಇದರಲ್ಲಿ ನೂರಾರು ಮಕ್ಕಳು ಮತ್ತು ಜಾನಪದ ನೃತ್ಯ ಕಲಾವಿದರು ಪಾಲ್ಗೋಂಡಿದ್ದರು. ಮೂರು ಭಾಷೆಯಲ್ಲಿ ಬರುತ್ತಿರುವುದರಿಂದ ಪ್ರತಿಯೊಂದು ಶಾಟ್‌ನ್ನು ಸ್ಕ್ರೀನ್ ತೆಲುಗು,ಕನ್ನಡ ಮತ್ತು ತಮಿಳು ಎಂದು ಹೇಳುತ್ತಾ ಯಾವುದೆ ಗೊಂದಲವಿಲ್ಲದೆ ನಿರಾಳವಾಗಿ ಎಲ್ಲರು ಅಭಿನಯಿಸುತ್ತಿದ್ದರು. ತಮ್ಮ ಶಾಟ್ ಬರುವ ತನಕ ಯುವ ಪ್ರೇಮಿಗಳಾದ ಸಂಯುಕ್ತಬೆಳವಾಡಿ ಮತ್ತು ತೇಜಸ್ ಕಾದು ಕುಳಿತಿದ್ದರು. ಊಟದ ನಂತರ ತಂಡವು ಮಾತಿಗೆ ಕುಳಿತುಕೊಂಡಿತು.
ಎರಡು ಹಂತದ ಶೂಟಿಂಗ್ ಮಾಡಲಾಗಿದೆ. ಸಂತೋಷ ನೆಮ್ಮದಿ ಸಿಕ್ಕಿದೆ. ಒಗ್ಗರಣೆ ಹಾಕಿ ಆಯಿತು. ನಾಟಕದ ಕಲಾವಿದರು ಅಭಿನಯಿಸಿದ್ದಾರೆ. ಇದೊಂದು ಮದ್ಯಮ ವರ್ಗದ ಪ್ರೇಮಕಥೆ. ಎಲ್ಲರೂ ಆಯಾ ಭಾಷೆಗೆ ಜೀವ ತುಂಬಿದ್ದಾರೆ. ಇಲ್ಲಿನ ವಾತವರಣ ನನಗೆ ಹಿಡಿಸಿದೆ. ಕರಿಮಣಿಸಿನಕಾಯಿ ತರಹ ನಾಯಕಿಯರು ಇರುತ್ತಾರೆ. ಜಯಂತ್ ಕಾಯ್ಕಿಣಿರವರ ನಾಲ್ಕು ಹಾಡಿನ ಸಾಹಿತ್ಯಕ್ಕೆ ಇಳಯರಾಜ ಸಂಗೀತ ಸಂಯೋಜಿಸಿದ್ದಾರೆ ಎಂದು ನಿರುಕ್ತಿ ನೀಡಿ ಪತ್ರಕರ್ತರ ಜಿಜ್ಘಾಸೆ ಪ್ರಶ್ನಗಳಿಗೆ ಜ್ವಲಂತದಿಂದ ಯಾಕೆ ಶಿವ, ಗುರುಗಳೆ ಎಂದು ಸಂಭೋದಿಸಿ ನಗಿಸಿ ಮಾತು ಮುಗಿಸಿದರು ಪ್ರಕಾಶ್‌ರೈ. ವಿಘಟಿತ ಸಂಬಂದದ ಕುರಿತ ಚಿತ್ರವನ್ನು ಪ್ರಕಾಶ್‌ರೈ ಚೆನ್ನಾಗಿ ನಿರ್ದೇಶನ ಮಾಡುತ್ತಿದ್ದಾರೆ ಅಂತ ಹೇಳಿದ ಮಂಡ್ಯಾರಮೇಶ್ ಅವರ ಕೆಲಸವನ್ನು ಗುಣಗಾನ ಮಾಡಲು ಮಾತನ್ನು ಮೀಸಲಿಟ್ಟರು. ಸ್ನೇಹ, ತೇಜಸ್ ಹೆಚ್ಚು ಮಾತನಾಡದೆ ಥ್ಯಾಂಕ್ಸ್ ಎಂದಷ್ಟೆ ಹೇಳಿದರೆ, ಸಂಯುಕ್ತ ಬೆಳವಾಡಿ ಚಿತ್ರದಲ್ಲ್ಲಿ ಕೆಲಸ ಮಾಡಿದ್ದು ಸಂಸ್ಥೆಯಲ್ಲಿ ಕಲಿತಂತೆ ಭಾಸವಾಯಿತು ಎಂಬುದು ಅವರ ಮಾತು. ಪತ್ನಿ, ಸಹನಿರ್ದೇಶಿಕಿ ಪೋನಿವರ್ಮ, ಛಾಯಗ್ರಾಹಕಿ ಗೌರಿ, ಕಲಾನಿರ್ದೇಶಕ ಕದೀರ್ ಗೋಷ್ಟಿಯಲ್ಲಿ ಉಪಸ್ತಿತರಿದ್ದರು. ಚಿತ್ರವು ಮಾರ್ಚ್‌ನಲ್ಲಿ ತೆರೆ ಕಾಣಲಿದೆ.
ಪಿಆರ್‌ಓ: ಸುದೀಂದ್ರವೆಂಕಟೇಶ್