Mahesh Babu Launching Punith`s Ninindale.Power Star Punith Rajkumars`s Ninindale all most completed after foreign shooting reaming schedule in Bangalore. Comedian of Telugu filmdom Brahmanandam Acteded in this film.
ಕನ್ನಡ ಸುಪ್ರಸಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ನಿನ್ನಿಂದಲೇ’ ಕನ್ನಡ ಸಿನೆಮಾದ ಧ್ವನಿ ಸುರುಳಿ ಬಿಡುಗಡೆ ಮಾಡಲು ತೆಲುಗು ಭಾಷೆಯ ಸುಪ್ರಸಿದ್ದ ನಟ ಮಹೇಶ್ ಬಾಬು ಅವರು ಮಾಡಲಿದ್ದಾರೆ. ಇತ್ತೀಚಿಗೆ ಅಮೆರಿಕ ದೇಶದಲ್ಲಿ ಚಿತ್ರೀಕರಣ ಮುಗಿಸಿ ಬಂದಿರುವ ‘ನಿನ್ನಿಂದಲೇ’ ಚಿತ್ರ ತಂಡ ಬಾಕಿ ಉಳಿದ ಭಾಗದ ಚಿತ್ರೀಕರಣ ಹಾಗೂ ಇನ್ನಿತರ ಚಟುವಟಿಕೆಗಳನ್ನು ಪ್ರಾರಂಭ ಮಾಡಿದೆ ಎನ್ನುತ್ತಾರೆ ನಿರ್ಮಾಪಕ ವಿಜಯ್.
‘ನಿನ್ನಿಂದಲೇ’ ಚಿತ್ರಕ್ಕೆ ಬ್ರಹ್ಮನಂದಾಮ್ ಖ್ಯಾತ ತೆಲುಗು ನಟ ಸಹ ಕನ್ನಡದಲ್ಲಿ ಅಭಿನಯಿಸಲು ಸೇರ್ಪಡೆ ಆಗಿದ್ದಾರೆ ಎಂಬುದು ಮತ್ತೊಂದು ಹೊಸ ವಿಚಾರ.
ಹೊಂಬಾಳೆ ಫಿಲ್ಮ್ಸ್ ಅವರ ಮೊದಲ ಕಾಣಿಕೆ ‘ನಿನ್ನಿಂದಲೇ’ ನಿರ್ದೇಶಕ ಜಯಂತ್ ಪರಂಜಿ ಅವರ ಮೊಟ್ಟ ಮೊದಲ ಕನ್ನಡ ಸಿನೆಮಾ. ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಯಂತ್ ಪರಂಜಿ ಅವರು ಪ್ರೇಮಿಂಚಿಕುಂದಾಮ್ರ, ಬಾವಗರು ಬಾಗುನ್ನರ, ಪ್ರೇಮಾಂಟೆ ಈಡೇರ, ಟಕ್ಕರಿ ಡೊಂಗ, ಈಶ್ವರ್, ಲಕ್ಷ್ಮಿ ನರಸಿಂಹ, ಶಂಕರ ದಾದಾ ಎಂ ಬಿ ಬಿ ಎಸ್, ಸಖಿಯ, ಅಲ್ಲಾರೀ ಪಿಡುಗು, ತೀನ್ ಮಾರ್ ಅಂತಹ ದೊಡ್ಡ ಬಜೆಟ್ಟಿನ ಹಾಗೂ ದೊಡ್ಡ ನಟರುಗಳ ಚಿತ್ರಗಳ ನಿರ್ದೇಶನ ಮಾಡಿದವರು.
ಅಮೆರಿಕ ದೇಶದಲ್ಲಿ ಕೆಲವು ಆಕ್ರಮಣಕಾರಿ ಸನ್ನಿವೇಶಗಳು ಹಾಗೂ ಮಾತಿನ ಭಾಗ, ಹಾಡುಗಳನ್ನು ಚಿತ್ರೀಕರಣ ೪೦ ದಿವಸಗಳಲ್ಲಿ ಮಾಡುವುದಕ್ಕೂ ಮುಂಚೆ ‘ನಿನ್ನಿಂದಲೇ’ ಚಿತ್ರವು ೨೦ ದಿವಸಗಳ ಚಿತ್ರೀಕರಣವನ್ನು ಕಂಠೀರವ ಸ್ಟುಡಿಯೋ, ಎಫ್ ಬಾರ್, ಒರಿಒನ್ ಮಾಲ್ ಕಾಫಿ ಶಾಪ್ ಹಾಗೂ ಮೂರು ದಿವಸಗಳ ಚಿತ್ರೀಕರಣ ಹೈದರಾಬಾದ್ ಅಲ್ಲಿ ಮುಗಿಸಿಕೊಂಡಿದೆ.
ಚಿನ್ನಿ ಪ್ರಾಕಾಶ್, ಕಲ್ಯಾಣ್ ಮಾಸ್ಟೆರ್ ಹಾಗೂ ರಾಜು ಸುಂದರಂ ಈ ಚಿತ್ರದ ನೃತ್ಯ ನಿರ್ದೇಶಕರು.‘ನಿನ್ನಿಂದಲೇ’ ನ್ಯೂ ಯಾರ್ಕ್ ಅಲ್ಲಿ ಚಿತ್ರೀಕರಣ ಮಾಡುವುದಕ್ಕಾಗಿ ಸ್ವದೇಶದ ಮೂರು ಹಾಗೂ ವಿದೇಶದ ಕೆಲವು ಕ್ಯಾಮರಗಳನ್ನು ಬಳಸಲಾಗಿದೆ.
ಮಣಿ ಶರ್ಮ ಅವರ ಸಂಗೀತ ಇರುವ ಈ ಚಿತ್ರದ ಸಂಕಲನಕಾರ ಮಾರ್ತಾಂಡ ಕೆ ಪ್ರಕಾಶ್, ನಿರ್ದೇಶಕ ಜಯಂತ್ ಸಿ ಪರಂಜಿ ಅವರ ಜೊತೆ ಶಂಕರ್ ಅವರು ಚಿತ್ರಕಥೆ ನೆರವು ನೀಡಿದ್ದಾರೆ. ವಿಂಧ್ಯ ಅವರು ಈ ಚಿತ್ರದ ಛಾಯಾಗ್ರಾಹಕರು.
ಪೋಷಕ ಪಾತ್ರಗಳಲ್ಲಿ ಅವಿನಾಷ್ ಶೃಂಗೇರಿ (ಜುಗಾರಿ) ವಿನಾಯಕ್ ಜೋಷಿ, ಸೋನಿಯ ದೀಪ್ತಿ, ಆಲೋಕ್ ಬಾಬು, ಅವಿನಾಷ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಪ್ರತಾಪ್, ಶ್ರೀ ನಿವಾಸ್ ಪ್ರಭು, ಸಿಹಿಕಹಿ ಚಂದ್ರು, ರೋಹಿಣಿ ರಘುವರನ್ ಹಾಗೂ ಇತರರು ಇದ್ದಾರೆ.