Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉಮಾ ಮಹೇಶ್ವರಿ - ದೈನಿಕ ಧಾರವಾಹಿ .
Posted date: 26/April/2009

ಕರ್ನಾಟಕ ಕಂಡ ಮೇರುಚಿಂತಕ ದಿ.ವಿ.ಜಿ   ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಒಂದು ಕಡೆ ಹೀಗೆ ನುಡಿದಿದ್ದಾರೆ .
ಅಸೆ ಬಲೆಯನು ಬೀಸಿ , ನಿನ್ನ ತನ್ನೆದೆಗೆಳೆದು |
ಘಾಸಿ ನೀಂ ಬಡುತ ಬಾಯಿಬಡಲೋರೆ ನೋಡಿ |
ಮೈ ಸವರಿ ಕಳನೆದವಿಸಿ ,ಗಟ್ಟಿ ನಲಿನಗುವ |
ಮೋಸದಾಟವೋ ದೈವ - ಮಂಕುತಿಮ್ಮ .

ಜೀವನ ಕೂಡ ಹೀಗೆಯೇ , ಅಸೆ ಬಲೆಗಳನ್ನು ಬಿಸುತ್ತಲೇ ಮನುಷ್ಯನನ್ನು ಅದರಲ್ಲಿ ಕೆಡವಿ , ಅವನು ಬಲೆಯಿಂದ ಬಿಡಿಸಿಕೊಳ್ಲಾಲಾಗದೇ , ಸಿಂಬಳದಲ್ಲಿ ಸಿಕ್ಕ ನೊಣದಂತೆ  ವಿಲಿವಿಲಿ ಒದ್ದಾಡುತ್ತಲೇ ಇರುತ್ತಾನೆ . ಕಡೆಗೊಂದು ದಿನ ಕೊನೆಯುಸಿರೆಳೆಯುತ್ತಾನೆ . ಅದನ್ನೇ ಜೀವನ ಅನ್ನಬಹುದೇನೋ.
ಕಥಾಹಂದರ :
ನಮ್ಮ ಕಥೆ ಎರಡು ತಲೆಮಾರುಗಳ ನಡುವಿನ ಜೀವನ ಮೌಲ್ಯಗಳ ಸಂಘರ್ಷದ    ಕಥೆ ಎನ್ನಬಹುದು . ಜೀವನ ಮೌಲ್ಯಗಳು ನದಿ ಇದ್ದಂತೆ .ಸದಾಕಾಲ ಹರಿಯುತ್ತಿರುವಂತೆ ಕಂಡರೂ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತಿರುತ್ತದೆ. ಎರಡು ಮೌಲ್ಯಗಳ ನಡುವೆ ಒಂದು ಸಾಮರಸ್ಯ ಸಾಧಿಸಿದರೆ , ಸಂಸಾರ ಸುಖಮಯವಾಗುತ್ತದೆ. ತಾವು ಹಿಡಿದ ದಾರಿಯೇ ಸರಿಯೆಂದು ಪ್ರತಿಯೊಬ್ಬ ಮನೆಯ ಸದಸ್ಯರೆಲ್ಲರೂ ಹಠ ಹಿಡಿದರೆ , ಅಂಥ ಮನೆ ರಣರಂಗವಾಗುತ್ತದೆ.ಬದಕು ಎಲ್ಲರ ಪಾಲಿಗೂ ಅಸಹನೀಯವಾಗುತ್ತದೆ   . ನಮ್ಮ ಧಾರಾವಾಹಿಯ ಪ್ರಮುಖ ಪಾತ್ರವಾದ ವಿಶ್ವನಾಥ್ ಶಿಸ್ತುಬದ್ಧ ಪ್ರಾಮಾಣಿಕ ಬದುಕು ನಡೆಸಿದವರು . ಮನೆಯ ಯಜಮಾನಿಕೆ ಮನೆಯ ಹಿರಿಯನದು ಎಂಬ ಮಾತಲ್ಲಿ ವಿಶ್ವಾಸವಿಟ್ಟವರು . ಯಜಮಾನನೇ  ತನ್ನ ವಿವೇಚನೆ ಬಳಸಿ , ಮನೆಯ ಹಿತ ಯಾವುದರಲ್ಲಿ ಇದೆ ಎಂಬುದನ್ನು ಅರಿತು ನಡೆಯಬೇಕು . ಮನೆಯ ಸದಸ್ಯರು  ಆತನನ್ನು ಅನುಸರಿಸಬೇಕು ಎಂದು ಭಾವಿಸಿದವರು .
ಹಿಂದಿನ ಒಟ್ಟು ಕುಟುಂಬ ಸುಖದಿಂದ ,ಸಂತೋಷದಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನಡೆಯುತ್ತಿದ್ದುದು ಇಂಥ ತಿಳುವಳಿಕೆಗಳಿಂದಲೇ ಅನ್ನುವುದು ಅವರ ನಂಬಿಕೆ . ಹಾಗಾಗಿ ಅವರು ತಮ್ಮ ಏಕೈಕ ಮಗನ ಹೆಂಡತಿಯಾಗಿ ಬರುವವಳು , ಮನೆಯವರೆಲ್ಲರ ಹಿತ ಕಾಯುವ ತಾಯಿಯಂತೆ ,ಅನ್ನಪ್ರೂಣೆಯನ್ತೆ , ಎಲ್ಲರ ಇಷ್ಟ ಅನಿಷ್ಟಗಳನ್ನು ಅರಿತು ಅವರೆಲ್ಲರಿಗೂ ಪ್ರಿಯವಾಗುವಂತೆ ,ಸರಳತೆ ಸಜ್ಜನಿಕೆಗಳಿಂದ ನಡೆದುಕೊಳುವವಳಗಿರಬೇಕು  ಎಂದು ತಾನು ಸೇರುವ ಮನೆಯನ್ನೇ ತಪೋಭುಮಿಯಂತೆ ಭಾವಿಸುವವಳಗಿರಬೇಕೆಂದು ಬಯಸುವವರು . ಅಂಥ ಹೆಣ್ಣು ವಿಶ್ವನಾಥ್ ತಂಗಿ ಮಗಳು ಗೀತಾ ಎಂದು ಅವರ ವಿಶ್ವಾಸ .
ಇದಕ್ಕೆ ತದ್ವಿರುದ್ದವಾಗಿ ಅವರ ಮಗ ಮೋಹನ್ ತನ್ನ ತಾಯಿಯ ಅಣ್ಣನ ಮಗಳು ಶ್ರೀಮಂತೆ , ವಿದ್ಯಾವಂತೆ ,ಅಧುನಿಕ ಸಮಾಜದ ಪ್ರತಿಕದಮ್ತಿರುವ  "ಮಹೇಶ್ವರಿ" ಯನ್ನು  ಮದುವೆಯಾಗಬಯಸಿದ್ದಾನೆ. ವಿಶ್ವನಾಥ್ ಗೆ ಮಹೇಶ್ವರಿ ಸಂಸಾರಕ್ಕೆ ಲಾಯಕ್ಕಿಲ್ಲ , ಅವಳೆನಿದ್ದರು "ಶೋಕೇಸ್ " ನೊಳಗಿನ ಪ್ರತಿಮೆ .ಮಗ ಮೋಹನನಿಗೆ ತಾಯಿ ಸರಸ್ಪತಿಯ ಬೆಂಬಲ . ತಾಯಿಗೆ ಮಹೇಶ್ವರಿ ತನ್ನ ಮನೆಗೆ ಹೊತ್ತು ತರುವ  ಸಂಪತ್ತು ಅಗಾಧವಾಗಿ ಕಾಣುತ್ತಿದೆ . ಮಹೇಶ್ವರಿಯ ಬಲ ಹೀನತೆಗಳು   ಮಸುಕಾಗಿದೆ . ಆದರೆ ವಿಶ್ವನಾಥ್ ಗೆ  ಪರರ ಆಸ್ತಿಗೆ , ಸಂಪತ್ತಿಗೆ ಮರುಳಾಗದ ,ತನ್ನ ದುಡಿಮೆ  ತನಗೆ ನೀಡಬಹುದಾದ ಸುಖ ಸಂತೋಷಗಳಿಗೆ ತೃಪ್ತನಾಗುವ  ಮನಸ್ಥಿತಿಯವರು .
ಮಗನ ಮದುವೆಯ ಪ್ರಸ್ತಾಪದಿಂದ ಶುರುವಾಗುವ ವ್ಯಕ್ತಿವ್ಯಕ್ತಿಗಳ ಸಂಘರ್ಷ , ವರ್ಗ ವರ್ಗಗಳ ನಡುವಿನ ಸಂಘರ್ಷವಾಗಿ ಬದಲಾಗುತ್ತದೆ .
ವಿಶ್ವನಾಥರ ಬಯಕೆಯಂತೆ ಅವರ ತಂಗಿ ಕಡೆಯ ಸಂಬಂಧವಾಗಲಿ ,ಸರಸ್ಪತಿ ಬಯಸಿದಂತೆ , ಅವರ ಅಣ್ಣನ ಕಡೆಯ ಸಂಬಂಧವಾಗಲಿ ಕೂಡದೆ , ಒಂದು ಸಾಧಾರಣ ಬಡ ಕುಟುಂಬದ ಅತ್ಯಂತ ಸಂಭಾವಿತ ಹುಡುಗಿ "ಉಮಾ" ವಿಶ್ವನಾಥರ ಸೊಸೆಯಾಗಿ ಅವರ ಮನೆ ಪ್ರವೇಶಿಸುತ್ತಾಳೆ . "ಉಮಾ" ವಿಶ್ವನಾಥ ಬಯಸಿದಂತೆ ಗುಣಸ್ವಭಾವಗಳನ್ನು ಹೊಂದಿದ ಹುಡುಗಿ .
ಮಾವ ವಿಶ್ವನಾಥ್ ತಾನು ಪ್ರತಿನಿಧಿಸುವ ಮೌಲ್ಯಗಳ ರಕ್ಷಣೆ ಮಾಡಬಲ್ಲ ಹುಡುಗಿ ಉಮಳನ್ನೇ ತನ್ನ ಮನೆಗೆ ಸೊಸೆಯಾಗಿ ತಂದ ಸಂತೋಷದಲ್ಲಿದ್ದರೆ ಅತ್ತೆ ಸರಸ್ಪತಿ ಮತ್ತು ಗಂಡ ಮೋಹನ , ಮಹೇಶ್ವರಿಯ ಬೆಂಬಲಕ್ಕೆ ನಿಲ್ಲುತ್ತಾರೆ .
ಎಅರದು ವಿರುದ್ದ ಸ್ವಭಾವಗಳ ಸಂಘರ್ಷದಲ್ಲಿ ಉಮಾ ಸಿಕ್ಕಿ ಹಾಕಿಕೊಳ್ಳುತ್ತಾಳೆ  .ಗಂಡನ ತಿರಸ್ಕಾರ , ಅತ್ತೆಯ ಕಿರುಕುಳ ಮಾವನ ಪ್ರೀತಿ ಇವುಗಳ ಮಧ್ಯದಲ್ಲಿ ಉಮಾ ತಾನು ಸೇರಿದ ಮನೆಯ ಶಾಂತಿ ,ಸೌಹಾರ್ಧೆತೆಗಳನ್ನು ಹೇಗೆ ಕಾಪಾಡುತ್ತಲೇ ? ಉಮಾ ಮತ್ತು ಮಹೇಶ್ವರಿಯ ನಡುವಿನ ಸಂಘರ್ಷ ವಿಶ್ವನಾಥರ ಸಂಸಾರವನ್ನು ಯಾವ ಘಟ್ಟಕ್ಕೆ ಕೊಂಡೊಯ್ಯುತ್ತದೆ ?ಉಮಾ ತನ್ನ ಸ್ವಭಾವದಿಂದ , ನೇರ ,ಗಟ್ಟಿತನದಿಂದ ಮನೆಯವರೆಲ್ಲರ ವಿಶ್ವಾಸ ಗಳಿಸುವಳೇ? ಅಥವಾ ಮಹೇಶ್ವರಿಯ ಮೋಹ , ಅವಳ ಸಂಪತ್ತು ಉಮಾಳನ್ನು ಅವಳ ಸ್ಥಾನದಿಂದ ದುಡಿ , ಮಹೇಶ್ವರಿ ಮೋಹನನ ಮಡದಿಯಾಗಿ ಮೆರೆಯುತ್ತಲೇ? ಅನ್ನುವ ಹಲವು ತಿರುವುಗಳ, ಅನೇಕ ಕುತೂಹಲ ಗಳುಳ್ಳ ಸಂಸಾರಿಕ ಕಥಾನಕವೇ "ಉಮಾ ಮಹೇಶ್ವರಿ".
ಮುಖ್ಯ ಪತ್ರಗಳ ಸುತ್ತ ಸುತ್ತುವ ಅನೇಕ ಆಸಕ್ತಿ ಹುಟ್ಟಿಸುವ ಪತ್ರಗಳು. ಅನಿರೀಕ್ಷಿತ ಘಟನೆಗಳು , ಸಾಮಾನ್ಯರ ಜೀವನದಲ್ಲಿ ಸಹಜವಾಗಿ ಉದ್ಬವಿಸುವ ಅನೇಕ ಘಟನೆಗಳು ಉಮಾ ಮಹೇಶ್ವರಿಯ ಕಥೆಯನ್ನು ಕುತೂಹಲ ಹುಟ್ಟಿಸುವಂತೆ  ನಮ್ಮ ಮನೆಯಲ್ಲೇ ನಡೆಯುತ್ತಿದೆಯೇನೋ ಎಂದು ಪ್ರೇಕ್ಷಕರು ಪಾತ್ರಗಳೊಂದಿಗೆ ಭಾವಸಂಬಂಧ ಬೆಳೆಸಿಕೊಲ್ಲಬಲ್ಲಂಥ ಕಥಾನಕ "ಉಮಾ ಮಹೇಶ್ವರಿ". 

ಕಲಾವಿದರು :
ಉಮಾ (ನಾಯಕಿ) :               ಸುಧಾರಾಣಿ .
ಮಹೇಶ್ವರಿ (ಖಳನಾಯಕಿ):      ರಾಜೇಶ್ವರಿ.
ಮೋಹನ್ (ನಾಯಕ) :           ಸುರೇಶ್ ರೈ .
ವಿಶ್ವನಾಥ್ :                        ಪೃಥ್ವಿರಾಜ್ .
ಉಮಾಳ ತಾಯಿ :                ಜಯಬಾಲು.
ಉಮಾಳ ಅಣ್ಣ :                   ರಾಜಗೋಪಾಲ್ ಜೋಷಿ.
ಉಮಾಳ ಅತ್ತಿಗೆ :                ಕಮಲ.
ಉಮಾಳ ತಂಗಿ :                 ಜಯಶೀಲ.
ಮೋಹನನ ತಾಯಿ:              ಪದ್ಮಿನಿ ಪ್ರಕಾಶ್.
ಮೋಹನನ ತಂಗಿ:               ಪದ್ಮಿನಿ.
ಮಹೇಶ್ವರಿಯ ತಾಯಿ:          ಪುಷ್ಪ ಸ್ವಾಮಿ.
ಮೋಹನನ ಅತ್ತೆ ಮಗಳು:     ಲಕ್ಷ್ಮೀ.

ನಿರ್ದೇಶನ : ಚಿ. ಗುರುದತ್.            

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉಮಾ ಮಹೇಶ್ವರಿ - ದೈನಿಕ ಧಾರವಾಹಿ . - Chitratara.com
Copyright 2009 chitratara.com Reproduction is forbidden unless authorized. All rights reserved.