Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಎಷ್ಟ್ ನಗ್ತಿ ನಗು ಈ ವಾರ ತೆರೆಗೆ
Posted date: 28/April/2009

ಶ್ರೀಕಂಠೇಶ್ವರ ಫ಼ಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಎಷ್ಟು ನಗ್ತಿ ನಗು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರ ನೋಡುಗರನ್ನು ರಂಜಿಸಲಿದೆ.
‘ಎಷ್ಟು ನಗ್ತಿ ನಗು ಹಲವು ವರ್ಷಗಳಿಂದ ಪ್ರೇಕ್ಷಕರಿಗೆ ಮೆಚ್ಚುಗೆಯಾದ ನಗೆ ನಾಟಕ. ಈ ಜನಪ್ರಿಯ ನಾಟಕವನ್ನು ಸಿನೆಮಾ ಮಾಡಿದವರು ನಿರ್ಮಾಪಕ ಚಿಂದೋಡಿ ಶ್ರೀಕಂಠೇಶ. ನಾಟಕದಷ್ಟೇ ಜನಪ್ರಿಯತೆಯನ್ನು ಈ ನಮ್ಮ ಸಿನೆಮಾ ಗಳಿಸಲಿದೆ ಎಂಬ ನಂಬಿಕೆ ನಿರ್ಮಾಪಕರಿಗಿದೆ.
ಅನಂತನಾಗ್, ದ್ವಾರಕೀಶ್, ಮೋಹನ್, ಶ್ರೀಕಂಠೇಶ, ಸುಧಾರಾಣಿ, ಬ್ಯಾಂಕ್ ಜನಾರ್ದನ್ ಅವರಂತ ಹಿರಿಯ ಕಲಾವಿದರು ಹಾಗೂ ಹೊಸನಟಿಯರಾದ ರೋಶಿನಿ. ಸನಾರೊಂದಿಗೆ ನಾಯಕನಾಗಿ ಚಿಂದೋಡಿ ವಿಜಯಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಕುಂದಾಪುರದ ಆಸುಪಾಸಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಿಂದೋಡಿ ಬಂಗಾರೇಶರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರವನ್ನು ಚಿಂದೋಡಿ ಮದುಕೇಶ ನಿರ್ದೇಶಿಸಿದ್ದಾರೆ. ಎಂ.ಎಸ್.ಮಾರುತಿ ಸಂಗೀತ, ಏಳುಕೋಟಿ ಚಂದ್ರು ಛಾಯಾಗ್ರಹಣ ‘ಎಷ್ಟು ನಗ್ತಿ ನಗು‘ ಚಿತ್ರಕ್ಕಿದೆ

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಎಷ್ಟ್ ನಗ್ತಿ ನಗು ಈ ವಾರ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.