ಶ್ರೀ ಸಂಕಷ್ಟಹರ ಗಣಪತಿ ಸಿನಿ ಆರ್ಟ್ಸ್ ಕಂಬೈನ್ಸ್ ಲಾಂಛನದಲ್ಲಿ ಶಿವು ಪಿ.ಬೆಳವಾಡಿ ನಿರ್ಮಿಸುತ್ತಿರುವ ಕೃಷ್ಣ ನಿರ್ದೇಶನದ ಆಸ್ಕರ್ ಚಿತ್ರಕ್ಕೆ ೧೮ ರಿಂದ ಮೈಸೂರಿನಲ್ಲಿ ದ್ವಿತೀಯ ಹಂತ ಆರಂಭ. ಈ ಚಿತ್ರಕ್ಕೆ ಛಾಯಾಗ್ರಹಣ ನವೀನ್ ಸುವರ್ಣ, ಸಂಗೀತ : ಜಿ.ಅಭಿಮನ್ ರಾಯ್, ಸಂಕಲನ : ನಾಗೇಂದ್ರ ಅರಸ್, ನಿರ್ದೇಶನ ಸಹಾಯ : ಸತೀಶ್ ಕುಮಾರ್, ಅರುಣಂ ಲಕ್ಷ್ಮಣ್, ಕಲೆ : ಹೊಸಮನೆ ಮೂರ್ತಿ, ನೃತ್ಯ : ರಘು - ಹೈಟ್ ಮಂಜು, ನಿರ್ವಹಣೆ : ಹೊಸಳ್ಳಿ ಸುದೀಂದ್ರ. ತಾರಾಗಣದಲ್ಲಿ ಅಶೋಕ್ ಕುಮಾರ್, ಪ್ರಿಯಾಂಕ ಬಲ್ಗನವರ್, ಕಬ್ಬಡಿ ಪ್ರಿಯಾಂಕ, ಶಾಂತಿಪ್ರಿಯ, ಅವಿನಾಶ್, ಕಾಶಿ, ಅರುಣ್ ಸಾಗರ್, ಪ್ರಭಾಕರ್ ಪಾಂಡೆ, ನಾರಾಯಣಸ್ವಾಮಿ, ರಮೇಶ್ ಪಂಡಿತ್ ಮುಂತಾದವರು ಅಭಿನಯಿಸುತ್ತಿದ್ದಾರೆ.