Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೈಸೂರಿನಲ್ಲಿ ರತ್ನಜರ ?ಪ್ರೇಮಿಸಂ
Posted date: 14/May/2009

ಒಬ್ಬ ವ್ಯಕ್ತಿ ತಾಯಿಯ ಮೇಲೆ ಎಷ್ಟು ಪ್ರೀತ್ರಿ ಇಟ್ಟಿರುತ್ತಾನೋ, ಅಷ್ಟೇ ಪ್ರೀತಿ ತನ್ನೂರಿನ ಬಗ್ಗೆ ಇಟ್ಟಿರುತ್ತಾನೆ. ನಿರ್ದೇಶಕ ರತ್ನಜ ಅವರಿಗೂ ಅಷ್ಟೇ. ಮೈಸೂರಿನ ಬಗ್ಗೆ ಅವರಿಗೆ ಹೆಚ್ಚಿನ ಮಮಕಾರ. ಅವರಿಗೆ ಆ ಊರಿನ ಬಗ್ಗೆ ಇರುವ ಅಭಿಮಾನಕ್ಕೆ ‘ನೆನಪಿರಲಿ ಚಿತ್ರದ ‘ಕುರಕ್ಕೆ ಕುಕ್ಕರಳ್ಳಿ ಕೆರೆ ಹಾಡೇ ಸಾಕ್ಷಿ.
   ಪ್ರಸ್ತುತ ಅವರು ನಿರ್ದೇಶಿಸುತ್ತಿರುವ ಮೂರನೇ ಚಿತ್ರ ‘ಪ್ರೇಮಿಸಂ ಕೂಡ ಕಳೆದವಾರ ಸಾಂಸ್ಕೃತಿಕ ನಗರಿಯಲ್ಲಿ ಆರಂಭವಾಗಿದೆ. ಅಂದು ನಡೆದ ಸರಳ ಮುಹೂರ್ತ ಸಮಾರಂಭದ ನಂತರ ರತ್ನಜ ಪತ್ರಕರ್ತರಿಗೆ ಸಿನೆಮಾದ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
    ‘ಪ್ರೇಮಿಸಂ ಎಂದರೆ ಏನು? ಎಂಬ ಪ್ರಶ್ನೆ ಪತ್ರಕರ್ತರಿಂದ ಕೇಳಿ ಬಂತು. ಅದಕ್ಕೆ ಉತ್ತರ ನೀಡಿದ ನಿರ್ದೇಶಕರು ರೌಡಿಗಳ ನಡುವಳಿಕೆಯನ್ನು ‘ರೌಡಿಯಿಸಂ ಎಂಬ ಹೆಸರಿನಿಂದ ಕರೆದ ಹಾಗೆ, ಪ್ರೇಮಿಗಳ ವೈಖರಿಯನ್ನು ‘ಪ್ರೇಮಿಸಂ‘ ಎನ್ನಬಹುದು ಅಂದರು.
   ಹತ್ತು ವರ್ಷದ ಹಿಂದೆ ಮೈಸೂರಿನ ಪೊಲೀಸ್ ಕ್ವಾಟ್ರಸೊಂದರಲ್ಲಿ ನಡೆದ ನೈಜ ಕಥಾನಕಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದ್ದಾಗಿ ತಿಳಿಸಿದ ರತ್ನಜ ಅವರು ಪೊಲೀಸ್ ಆಫ಼ಿಸರ್ ಹಾಗೂ ಮುಖ್ಯ ಪೇದೆ ನಡುವಿನ ಉತ್ತಮ ಬಾಂಧವ್ಯವನ್ನು ಎತ್ತಿ ಹಿಡಿಯುವ ಕಥಾ ಹಂದರ ನಮ್ಮ ಚಿತ್ರದಲ್ಲಿದೆ ಎಂದರು. ಈ ಎರಡು ಮುಖ್ಯ ಪಾತ್ರಗಳಲ್ಲಿ ಅನಂತನಾಗ್ ಹಾಗೂ ಅವಿನಾಶ್ ಅವರು ಅಭಿನಯಿಸುತ್ತಿದ್ದು, ಅವರಿಗೆ ಜೋಡಿಯಾಗಿ ರೇಖಾ.ವಿ.ಕುಮಾರ್ ಹಾಗೂ ಸಂಗೀತ ನಟಿಸುತ್ತಿದ್ದಾರೆ.
    ತಮ್ಮ ಪಾತ್ರ ಕುರಿತು ಮಾತನಾಡಿದ ನಟ ಅನಂತನಾಗ್ ‘ನಾನು ಹಿಂದೆ ಕೆಲವು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದೇನೆ. ಈ ಚಿತ್ರದಲ್ಲೂ ನನಗೆ ಅದೇ ಪಾತ್ರ ದೊರಕ್ಕಿದೆ. ಇದು ನನಗೆ ಬಹಳ ಮೆಚ್ಚುಗೆಯಾದ ಪಾತ್ರ ಎಂದು ತಿಳಿಸಿದರು.
    ನಿರ್ದೇಶಕರ ಹಿಂದಿನ ಚಿತ್ರಗಳನ್ನು ನಿರ್ಮಾಣ ಮಾಡಿ ಪ್ರಸ್ತುತ ಚಿತ್ರಕ್ಕೂ ನಿರ್ಮಾಪಕರಾಗಿರುವ ಅಜಯ್.ಆರ್.ಗೌಡ ಅವರು ಮಾತನಾಡಿ  ‘ನಾನು, ರತ್ನಜ ಕಾಲೇಜಿನ ಸ್ನೇಹಿತರು. ಅವರಿಗೆ ಆ ದಿನಗಳಿಂದಲ್ಲೂ ಸಾಹಿತ್ಯ, ಸಂಗೀತ ಹಾಗೂ ಸಿನೆಮಾದಲ್ಲಿ ಆಸಕ್ತಿ. ಹಾಗಾಗಿ ನಾನು ಅವರಿಗಾಗಿ ‘ನೆನಪಿರಲಿ ಎಂಬ ಚಿತ್ರವನ್ನು ನಿರ್ಮಿಸಿದೆ. ಮೊದಲ ಪ್ರಯತ್ನವೇ ನಿರ್ದೇಶಕರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ದ್ವಿತೀಯ ಚಿತ್ರ ‘ಹೊಂಗನಸು‘ ನಮ್ಮ ನಿರೀಕ್ಷೆಯಷ್ಟು ಯಶಸ್ಸು ಕಾಣಲಿಲ್ಲ. ಈಗ ಮೂರನೇ ಚಿತ್ರ ಆರಂಭಿಸಿದ್ದೇವೆ. ನನಗೆ ರತ್ನಜರ ಬಗ್ಗೆ ನಂಬಿಕೆಯಿದೆ. ಈ ಚಿತ್ರ ಕೂಡ ಜನ ಮೆಚ್ಚುವ ರೀತಿಯಲ್ಲಿ ಅವರು ನಿರ್ದೇಶಿಸುತ್ತಾರೆಎಂದು ನುಡಿದರು.
   ಪಿ.ಯು.ಸಿ ಚಿತ್ರದ ನಾಯಕ ಚೇತನ್ ಹಾಗೂ ಕೊಡಗಿನ ಹುಡುಗ ನೀರನ್ ಈ ಚಿತ್ರದ ನಾಯಕರ ಪಾತ್ರ ನಿರ್ವಹಿಸುತ್ತಿದ್ದು, ಇಬ್ಬರೂ ನಾಯಕರು ತಮ್ಮ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿ, ಅವಕಾಶ ಕೊಟ್ಟವರಿಗೆ ಅಭಿನಂದನೆ ಸಲ್ಲಿಸಿದರು.
   ‘ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ‘ಪ್ರೇಮಿಸಂನ ನಾಯಕಿ. ‘ನಾನು ಇಲ್ಲಿಯರೆಗೂ ನಟಿಸಿದ ಎರಡು ಚಿತ್ರಗಳ ಕಥೆಯನ್ನು ನಾರಾಯಣ್ ಅವರು ನನಗೆ ಹೇಳಿರಲಿಲ್ಲ. ಆದರೆ ರತ್ನಜ ಅವರು ಪೂರ್ತಿ ಚಿತ್ರಕಥೆಯನ್ನು ನನಗೆ ಹೇಳಿದರು. ಹಾಗೂ ‘ನೆನಪಿರಲಿ ಚಿತ್ರ ನೋಡಿ ರತ್ನಜ ಅವರ ಅಭಿಮಾನಿಯಾಗಿದ್ದೆ. ಅವಕಾಶ ಸಿಕ್ಕರೆ ಅವರ ನಿರ್ದೇಶನದಲ್ಲಿ ನಟಿಸಬೇಕು ಎಂಬ ಆಸೆಯನ್ನು ಹೊಂದಿದ್ದೆ. ನನ್ನ ಹಂಬಲವನ್ನು ದೇವರು ಬೇಗನೇ ಈಡೇರಿಸಿದ ಎಂದ ಅಮೂಲ್ಯ ದೇವರ ಜೊತೆ ನಿರ್ದೇಶಕ ಹಾಗೂ ನಿರ್ಮಾಪಕರಿಗೂ ಧನ್ಯವಾದ ತಿಳಿಸಿದರು.
    ನಿರ್ಮಾಪಕರ ತಂದೆ ರಾಮಲಿಂಗೇ ಗೌಡರ ಮನೆಯಲ್ಲಿ ಆರಂಭವಾದ ಚಿತ್ರದ ಚಿತ್ರೀಕರಣ ಮೈಸೂರು ಸೇರಿದಂತೆ ಬೆಂಗಳೂರು ಹಾಗೂ ಬೆಳಗಾಂನಲ್ಲಿ ೬೦ ದಿನಗಳ ಕಾಲ ನಡೆಯಲಿದೆ. ನವೀರದ ಪ್ರೇಮದ ಜೊತೆ ಕೌಟುಂಬಿಕ ಸನ್ನಿವೇಶಗಳು ಚಿತ್ರದಲ್ಲಿದ್ದು, ಹಾಡಿನ ಚಿತ್ರೀಕರಣಕ್ಕಾಗಿ ಗೋಕಾಕ್ ಫ಼ಾಲ್ಸ್ ಸೇರಿದಂತೆ ಕರ್ನಾಟಕದ ರಮ್ಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿರುವುದ್ದಾಗಿ ರತ್ನಜ ತಿಳಿಸಿದ್ದಾರೆ.
ಹಂಸಲೇಖ ಅವರು ಈ ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತ ಸಂಯೋಜಿಸುತ್ತಿದ್ದಾರೆ. ಶೀತಲ್ ಜೈನ್ ಅವರ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಇಮ್ರಾನ್, ದೇವರಾಜ್ ನೃತ್ಯ, ಡಿಫ಼ರೆಂಟ್ ಡ್ಯಾನಿ ಸಾಹಸ, ಚಂದ್ರಪ್ಪ ನಿರ್ಮಾಣ ನಿರ್ವಹಣೆ, ರವಿಕುಮಾರ್ ಅವರ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ನೀರನ್, ಅಮೂಲ್ಯ, ಅನಂತನಾಗ್, ಅವಿನಾಶ್, ರೇಖಾ.ವಿ.ಕುಮಾರ್, ಸಂಗೀತ, ಶೋಭರಾಜ್,ಶರಣ್, ಕುರುಗಳು ಸಾರ್ ಕುರಿಗಳು ಪ್ರಸಾದ್, ಸುನಿತಾ ಮುಂತಾದವರಿದ್ದಾರೆ.

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೈಸೂರಿನಲ್ಲಿ ರತ್ನಜರ ?ಪ್ರೇಮಿಸಂ - Chitratara.com
Copyright 2009 chitratara.com Reproduction is forbidden unless authorized. All rights reserved.