Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಾತು ಮುಗಿಸಿದ ?ಐ.ಪಿ.ಸಿ ಸೆಕ್ಷನ್ 300
Posted date: 25/May/2009

ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಐ.ಪಿ.ಸಿ ಸೆಕ್ಷನ್ 300  ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ ಎಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ.
ಮಾತುಗಳ ಜೋಡಣೆ ಚಿತ್ರದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಚಿತ್ರೀಕರಣದಲ್ಲಿ ನಟನಾ ಕೌಶಲ್ಯ ಪ್ರದರ್ಶಿಸಿದ ತಾರೆಯರು ಈ ಪ್ರಕ್ರಿಯೆಯಲ್ಲಿ ಆಯಾ ಸನ್ನಿವೇಶಗಳಿಗೆ ಮಾತಿನ ಮೂಲಕ ಪಾತ್ರಕ್ಕೆ ಜೀವ ತುಂಬಬೇಕಾಗುತ್ತದೆ. ಕೆಲವು ನಟರು ಸ್ವತಃ ಡಬ್ಬಿಂಗ್‌ನಲ್ಲಿ ಪಾಲ್ಗೊಂಡರೆ, ಮತ್ತೆ ಕೆಲವು ಕಲಾವಿದರಿಗೆ ಕಂಠದಾನ ಕಲಾವಿದರು ಮಾತನಾಡುವುದುಂಟು. ಮಾತುಗಳ ಜೋಡಣೆ ಮುಗಿದರೆ ಚಿತ್ರದ ಅರ್ಧ ಚಟುವಟಿಕೆಗಳು ಮುಗಿದಂತೆ ಎಂಬ ಅಭಿಪ್ರಾಯ ನಿರ್ಮಾಪಕರದು.
ಈ ನಿಟ್ಟಿನಲ್ಲಿ ತಮ್ಮ ಚಿತ್ರಕ್ಕೆ ಡಬ್ಬಿಂಗ್ ಪೂರ್ಣಗೊಳಿಸಿರುವ ನಿರ್ಮಾಪಕ ಆರ್.ಶಂಕರ್ ನಂತರದ ಚಟುವಟಿಕೆಗಳನ್ನು ಶೀಘ್ರದಲ್ಲೇ ಪೂರೈಸಿ ಚಿತ್ರವನ್ನು ತೆರೆಗೆ ತರುವ ಯತ್ನದಲಿದ್ದಾರೆ. ಕುತೂಹಲ ಸನ್ನಿವೇಶಗಳಿಂದ ಕೂಡಿರುವ ಈ ಚಿತ್ರವನ್ನು ಶಶಿಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.  ವೀರಸಮರ್ಥ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಶಂಕರ್, ಮುನಿ, ರವೀಂದ್ರನಾಥ್ ಮುಂತಾದವರಿದ್ದಾರೆ.

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾತು ಮುಗಿಸಿದ ?ಐ.ಪಿ.ಸಿ ಸೆಕ್ಷನ್ 300 - Chitratara.com
Copyright 2009 chitratara.com Reproduction is forbidden unless authorized. All rights reserved.