Chief Editor
Manohar. R (Manu)
Photo Journalist
chitrataramanu@gmail.com
+91 9845549026
‘#13-?’ ಚಿತ್ರದಲ್ಲಿ ಗಾಯಕ ಚನ್ನಪ್ಪ ಹುದ್ದಾರ್ ನಾಯಕ!
Posted date: 25 Fri, Nov 2016 – 11:20:37 AM

೨೦೧೫ರಲ್ಲಿ ಸರಿಗಮಪ ರಿಯಾಲಿಟಿ ಸಿಂಗಿಂಗ್ ಶೋನಲ್ಲಿ ವಿಜೇತರಾಗಿದ್ದ ಚನ್ನಪ್ಪ ಹುದ್ದಾರ್ ಈಗ ಸಿನಿಮಾ ಹೀರೋ ಆಗುತ್ತಿದ್ದಾರೆ.
ಅದ್ಭುತ ಕಂಠಸಿರಿ ಮತ್ತು ಗಾಯನ ಪ್ರತಿಭೆಯನ್ನು ಹೊಂದಿರುವ ಚನ್ನಪ್ಪ ಚಿತ್ರನಟನಾಗಬೇಕು ಎನ್ನುವ ಹಂಬಲ ವ್ಯಕ್ತಪಡಿಸುತ್ತಿದ್ದರು. ಈಗ ಕೀರ್ತನ ಕ್ರಿಯೇಶನ್ಸ್ ಸಂಸ್ಥೆಯಿಂದ ಹೊರಹೊಮ್ಮುತ್ತಿರುವ ‘#13-?’ ಚಿತ್ರದ ಮೂಲಕ ಚನ್ನಪ್ಪನವರ ಬಯಕೆ ಈಡೇರುತ್ತಿದೆ. ಈ ಚಿತ್ರದಲ್ಲಿ ಚನ್ನಪ್ಪ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಗಾನ ಸುಧ ಎಂಬ ತಮ್ಮದೇ ವಾದ್ಯಗೋಷ್ಠಿಯನ್ನು ಹೊಂದಿರುವ, ತುಮಕೂರು ನಂದನ್ ಎಂದೇ ಹೆಸರಾಗಿರುವ ಎಸ್. ನಂದಕುಮಾರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಶ್ರೀಮತಿ ಎನ್.ಜಿ. ಸುಜಾತ ನಂದನ್ ಸಹ ನಿರ್ಮಾಪಕರು. ಈ ಚಿತ್ರದ ನಿರ್ಮಾಣ ಮೇಲ್ವಿಚಾರಣೆಯನ್ನು ಗೋಪಿ ಊರುಕೆರೆ ಅವರು ವಹಿಸಿಕೊಂಡಿದ್ದಾರೆ.  ಇತ್ತೀಚೆಗೆ ತುಮಕೂರಿನ ಶ್ರೀ ರಾಮ ದೇವಾಲಯದಲ್ಲಿ ಸರಳ ಪೂಜೆ ನಡೆಸುವ ಮೂಲಕ ಚಿತ್ರ ಚಾಲನೆಗೊಂಡಿದೆ. ಚಿತ್ರದ ಮೊದಲ ದೃಶ್ಯಕ್ಕೆ ತುಮಕೂರಿನ ೧೭ನೇ ವಾರ್ಡ್ ಕಾರ್ಪೊರೇಟರ್ ರಾಮಕೃಷ್ಣ ಅವರು ಆರಂಭ ಫಲಕ ತೋರಿದರು. ಮಾಲಾ ಶಿವಕುಮಾರ್, ಸುಜಾತಾ ನಂದನ್ ಮತ್ತು ಕೀರ್ತನಾ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಸಿನಿಮಾ ಶಾಲೆಗಳಲ್ಲಿ ನಿರ್ದೇಶನದ ವರಸೆಗಳನ್ನು ಕಲಿತುಬಂದಿರುವ ನವನಿರ್ದೇಶಕ ಜೈವರ್ಧನ್ ಅವರು ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘#13-?’ ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಲೋಕಿ ರಾಗ ಸಂಯೋಜಿಸುತ್ತಿದ್ದಾರೆ. ಹಂಸಲೇಖ ಅವರ ಗರಡಿಯಲ್ಲಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ಲೋಕಿ ಅವರಿಗೆ ಇದು ಸಂಗೀತ ನಿರ್ದೇಶನದಲ್ಲಿ ಮೊದಲ ಚಿತ್ರ. ಎಸ್.ಎಲ್.ವಿ. ರವಿ ಈ ಚಿತ್ರದ ಛಾಯಾಗ್ರಹಣ ಮತ್ತು ಅಕುಲ್ ನೃತ್ಯ ನಿರ್ದೇಶನ, ಶರಣ್ ತಾಳದ್ ಎಂ., ಕಾಳಿದಾಸ್ ಮತ್ತು ರಂಜಿತ್ ಪಿ. ಅವರ ಸಹಾಯಕ ನಿರ್ದೇಶನ ಈ ಚಿತ್ರಕ್ಕಿದೆ.
“ಇದು ಚಿತ್ರ ಅಲ್ಲ ವಿಚಿತ” ಎನ್ನುವ ಅಡಿಬರಹದೊಂದಿಗೆ, ಸೈಕಲಾಜಿಕಲ್ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾ ಹಂದರ ಹೊಂದಿರುವ ‘#೧೩-?’ ಚಿತ್ರಕ್ಕೆ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲಾಗುತ್ತಿದೆ. ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ೩೦ ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ‘#13-?’ ಚಿತ್ರದಲ್ಲಿ ಗಾಯಕ ಚನ್ನಪ್ಪ ಹುದ್ದಾರ್ ನಾಯಕ! - Chitratara.com
Copyright 2009 chitratara.com Reproduction is forbidden unless authorized. All rights reserved.