Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಸೂಪರ್ ಸ್ಟಾರ್`` ಜೊತೆ ಸುಂದರಂ ಮಾಸ್ಟರ್
Posted date: 24 Sat, Apr 2021 05:52:44 PM
ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ``ಸೂಪರ್ ಸ್ಟಾರ್`` ಚಿತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ (ಪ್ರಭುದೇವ ಅವರ ತಂದೆ) ಅಭಿನಯಿಸಿದ್ದಾರೆ. 
86 ರ ವಯಸ್ಸಿನಲ್ಲೂ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಸುಂದರಂ ಮಾಸ್ಟರ್, ಈ ಚಿತ್ರದಲ್ಲೂ ನೃತ್ಯ ನಿರ್ದೇಶಕನ‌ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. 
ಇತ್ತೀಚೆಗೆ ಇವರ ಅಭಿನಯದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು.
ಈ ವಯಸ್ಸಿನಲ್ಲೂ ಯಾರಿಗೂ ಕಮ್ಮಿ ಇಲ್ಲದ ಹಾಗೆ ನಟಿಸಿರುವ ಸುಂದರಂ ಮಾಸ್ಟರ್ ಚಿತ್ರೀಕರಣದ ವೇಳೆ ಪಾಲ್ಗೊಂಡ ಕೆಲವು ಸನ್ನಿವೇಶಗಳನ್ನು ಚಿತ್ರತಂಡ ಮೇಕಿಂಗ್ ಟೀಸರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. 
ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಈ ಚಿತ್ರದ ಎರಡು ಹಂತಗಳ ಚಿತ್ರೀಕರಣ ‌ಮುಕ್ತಾಯವಾಗಿದೆ.‌ ಮೂರನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.‌  
ನಿರಂಜನ್ ಸುಧೀಂದ್ರ ಈ ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಔಟ್ ಮಾಡಿದ್ದಾರೆ. ಜಾರ ಎಸ್ಮಿನ್ ಈ ಚಿತ್ರದ ನಾಯಕಿ.
ಅಚ್ಯುತ ಕುಮಾರ್, ರಂಗಾಯಣ ರಘು,  ದೇವಿಯಾನಿ, ಸುಧಾ ಬೆಳವಾಡಿ, ಅವಿನಾಶ್, ಸೂರಜ್ (ಕಾಮಿಡಿ ಕಿಲಾಡಿಗಳು) ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. 
RVB  ಸಿನಿಮಾಸ್ ಲಾಂಛನದಲ್ಲಿ ಮೈಲಾರಿ ಎಂ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ ನೀಡುತ್ತಿದ್ದಾರೆ.
 ಚೇತನ್ ಕುಮಾರ್(ಭರ್ಜರಿ) ಹಾಡುಗಳನ್ನು ಬರೆದಿದ್ದಾರೆ. ಯೋಗಿ ಛಾಯಾಗ್ರಹಣ,  ವಿಜಯ್ ಕುಮಾರ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಸೂಪರ್ ಸ್ಟಾರ್`` ಜೊತೆ ಸುಂದರಂ ಮಾಸ್ಟರ್ - Chitratara.com
Copyright 2009 chitratara.com Reproduction is forbidden unless authorized. All rights reserved.