ಲಾಕ್‌ಡೌನ್ ಅವಧಿಯಲ್ಲಿ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ, ತಂತ್ರಜ್ಘರು ಮಾತ್ರ ಏನಾದರೊಂದು ಕೆಲಸವನ್ನು ಮಾಡುತ್ತಿರುತ್ತಾರೆ ಎಂಬುದಕ್ಕೆ ಸಾಕ್ಷಿ ಸಾಹಿತಿ ಮಂಜುಕವಿ ಕಣ್ಣ ಮುಂದೆ ನಿಲ್ಲುತ್ತಾರೆ.ಇವರಕುರಿತು ಹೇಳುವುದಾದರೆ ಸುಮಾರು ಮುನ್ನೂರಕ್ಕೂ ಹೆಚ್ಚು ಆಲ್ಬಂ ಗೀತೆಗಳಿಗೆ ಸಾಹಿತ್ಯ, ಸಂಗೀತ ಅಲ್ಲದೆ ಕೆಲವೊಂದು ಚಿತ್ರಗಳಿಗೆ ಹಾಡುಗಳನ್ನು ಬರೆದುಕೊಟ್ಟಿದ್ದು ಉಂಟು.ಇದರ ಅನುಭವದಿಂದಲೇ ಟೆಂಪರ್ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ ಬರೆದು ಮೊದಲ ಬಾರಿ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ಸದರಿ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿದೆ. ಸದ್ಯಇವರು ಲೋಕಲ್ ಬ್ರಾಂಡ್ ಎನ್ನುವ ವಿಡಿಯೋ ಆಲ್ಬಂಗೆ ರಚನೆ, ರಾಗ ಸಂಯೋಜಿಸಿ ಹೊಸ ಪ್ರಯೋಗ ಎನ್ನುವಂತೆ ಹಾಡಿಗೆ ಧ್ವನಿ ನೀಡಿರುವುದು ಹಾಗೂ ಉತ್ತರಕನ್ನಡ ಭಾಷೆಯ ಧಾಟಿಯಲ್ಲಿ ಸಾಲುಗಳು ಇರುವುದು ವಿಶೇಷ.
ಹಲವು ಚಿತ್ರಗಳಿಗೆ ಬಣ್ಣಹಚ್ಚಿರುವ ಸಮಾಜ ಸೇವಕ ಬಾಗಲಕೋಟೆ ಮೂಲದ ಪಿ.ದೀಕ್ಷಿತ್ ಎಣ್ಣೆ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊದಿಗೆ ಜ್ಯೋತಿಗುಳೇದಗುಡ್ಡ, ಆನಂದ್ ಭದ್ರಣ್ಣವರ, ಅಶೋಕ ಅಂಗಡಿ, ಪರಶುಜಮ್ಮನಕಟ್ಟಿ ಮುಂತಾದವರು ನಟಿಸಿದ್ದಾರೆ. ಹೆಸರೇ ಹೇಳುವಂತೆ ಹಳ್ಳಿಯ ಬಡಕುಟುಂಬದ ಯಜಮಾನ ಎಣ್ಣೆಗೆ ದಾಸನಾದರೆ ಪರಿಸ್ಥಿತಿ ಏನಾಗುತ್ತದೆ. ಇಂತಹವರುಕುಡಿಲಿಲ್ಲ ಅಂದರೆ ಸರ್ಕಾರಕ್ಕೆ ಆದಾಯ ಬರೋಲ್ಲ. ಅಕ್ಕಿ ಬೇಳೆಗೆ ಲೆಕ್ಕ ಹಾಕುತ್ತಾರೆ. ಆದರೆ ವರ್ಷಕ್ಕೆ ಎಷ್ಟು ಕುಡಿದೆ ಅಂತ ಗಣನೆ ಮಾಡುವುದಿಲ್ಲ. ಅಕಸ್ಮಾತ್ ಇವರೇನಾದರೂ ಕೆಟ್ಟ ಚಟವನ್ನು ತ್ಯಜಿಸಿದರೆ ಅಂದೇ ಸರ್ಕಾರಕ್ಕೂ ಆರ್ಥಿಕವಾಗಿ ಸಂಕಷ್ಟ ಆಗುತ್ತದೆ ಎಂಬುದನ್ನು ಹಾಡಿನಲ್ಲಿ ಹೇಳಲಾಗಿದೆ.
ಛಾಯಾಗ್ರಹಣ ಶರಣುಖ್ಯಾದಿಗೇರಿ, ಮಂಜು ಗುಳೇದಗುಡ್ಡ, ಸಂಕಲನ ನವೀನ್‌ಸಂಕಲ್ಪ ಅವರದಾಗಿದೆ. ಶನಿವಾರ ದಂದು ಆನಂದ್ ಆಡಿಯೋದವರು ಆಲ್ಬಂನ್ನು ಲೋಕಾರ್ಪಣೆ ಮಾಡಿದ್ದಾರೆ.