Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸ್ಟಾರ್ ಸುವರ್ಣ ವಾಹಿನಿಯಲ್ಲಿ ``ಕುಕ್ಕು ವಿಥ್ ಕಿರಿಕ್ಕು`` ಶೋ ಗೆ ಕುಕ್ಕಿಂಗ್ ಕಿಂಗ್ ಕಿಚ್ಚ ಸುದೀಪ್
Posted date: 06 Tue, Apr 2021 06:03:42 PM
ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸೋಕೆ, ಕರುನಾಡನ್ನ ಪ್ರತಿ ವಾರಾಂತ್ಯದಲ್ಲಿ ರಂಜಿಸೋಕೆ ಕನ್ನಡಿಗರ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಶೋ ಆರಂಭವಾಗ್ತಿದೆ. ಕನ್ನಡ ಟಿವಿ ಲೋಕದ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಅತಿ ದೊಡ್ಡ ಮಟ್ಟದಲ್ಲಿ ಕುಕಿಂಗ್ ಜೊತೆ ಅದ್ದೂರಿ ಕಾಮಿಡಿ ಔತಣ ಬಡಿಸೋಕೆ ಬರುತ್ತಿರುವ ಕಾರ್ಯಕ್ರಮ ``ಕುಕ್ಕು ವಿಥ್ ಕಿರಿಕ್ಕು``.. ಏನನ್ನಾದರೂ ಹೊಸದನ್ನು ಹಂಬಲಿಸುತ್ತಿರುವ ಕನ್ನಡ ಪ್ರೇಕ್ಷಕ ಪ್ರಭುಗಳಿಗೆ ಕುಕ್ಕು ವಿಥ್ ಕಿರಿಕ್ಕು ಹೊಟ್ಟೆ ತುಂಬಾ ನಗು, ಹೊಸ ರೀತಿಯ ಮನರಂಜನೆ ನೀಡುವುದಂತೂ ಸುಳ್ಳಲ್ಲ.. 
 
ಕುಕ್ಕು ವಿಥ್ ಕಿರಿಕ್ಕು ಗ್ರಾಂಡ್ ಓಪನಿಂಗ್ ಗೆ ಶುಭಾರಂಭ ನೀಡಿ ಹಾರೈಸಲು ಬಂದಿದ್ದು ಅಖಂಡ ಭಾರತದಲ್ಲಿ ಕನ್ನಡದ ಹೆಸರು ಬೆಳಗಿದ ಅಭಿನಯ ಚಕ್ರವರ್ತಿ, ಕರುನಾಡ ಬಾದಷಾ ಕಿಚ್ಚ ಸುದೀಪ್. ಕನ್ನಡದ ಅತಿದೊಡ್ಡ ಕಾಮಿಡಿ ಕುಕ್ಕಿಂಗ್ ಶೋ ಗೆ ಖುದ್ದು ಕನ್ನಡದ ಕುಕ್ಕಿಂಗ್ ಕಿಂಗ್ ಕಿಚ್ಚ ಬಂದದ್ದು, ಕಾರ್ಯಕ್ರಮಕ್ಕೆ ಅಮೋಘ ಆರಂಭ ಸಿಕ್ಕಂತಾಯಿತು. ಪ್ರತಿ ಕುಕ್ಕು ಹಾಗೂ ಕಿರಿಕ್ ಬಗ್ಗೆ ಮಾತನಾಡುತ್ತಾ ಅಕುಲ್ ಜೊತೆ ಸಿಕ್ಕಾಪಟ್ಟೆ ಮಜಾ ಮಾಡಿದರು ಕಿಚ್ಚ ಸುದೀಪ್. ಇದೇ ಏಪ್ರಿಲ್ 10 ರ ಶನಿವಾರ ರಾತ್ರಿ 8:30 ಕ್ಕೆ ಕುಕ್ಕು ವಿಥ್ ಕಿರಿಕ್ಕು ಗ್ರಾಂಡ್ ಓಪನಿಂಗ್ ಆರಂಭವಾಗಲಿದ್ದು, ನಂತರ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
 
ಕುಕ್ಕು ವಿಥ್ ಕಿರಿಕ್ಕು ಕಾರ್ಯಕ್ರಮದ ಅತಿದೊಡ್ಡ ಶಕ್ತಿ, ನಗುವಿನ ಸಾರಥಿ ಅಕುಲ್ ಬಾಲಾಜಿ. ಪ್ರತಿ ವಾರ ನಿಮ್ಮ ಮನೆಗೆ ಬಂದು ಕಾಮಿಡಿ ಜೊತೆ ಕಿರಿಕ್ ಮಾಡುವ ಅತಿದೊಡ್ಡ ಕಿರಿಕ್ ಅಕುಲ್.. ಅವರ ಜೊತೆ ಕುಕ್ಕಾಗಿ ಬೊಂಬಾಟ್ ಭೋಜನದ ಸಾರಥಿ, ಕರ್ನಾಟಕದ ಅಡುಗೆಯ ಬ್ರಾಂಡ್ ಅಂಬಾಸಡರ್ ಸಿಹಿ ಕಹಿ ಚಂದ್ರು ಅಡುಗೆಯ ಜೊತೆ ನಗುವನ್ನು ರುಚಿಯಾಗಿ ಬಡಿಸಲಿದ್ದಾರೆ. ಅವರ ಜೊತೆ ವಿಶ್ವದೆಲ್ಲೆಡೆ ದೊಡ್ಡ ಶೆಫ್ ಆಗಿ ಹೆಸರು ಮಾಡಿರುವ ದಕ್ಷಿಣ ಭಾರತದ ದೊಡ್ಡ ಹೋಟೆಲ್ ನ CEO ಉಡುಪಿಯ ಕನ್ನಡಿಗ ವೆಂಕಟೇಶ್ ಭಟ್ ಈ ಕಾರ್ಯಕ್ರಮದಲ್ಲಿ ಕುಕ್ಕಿಂಗ್ ನ ಮತ್ತೊಬ್ಬ ಶಕ್ತಿ.
 
ಕುಕ್ಕು ವಿಥ್ ಕಿರಿಕ್ಕು ಕಾರ್ಯಕ್ರಮದ ವಿಶೇಷತೆ ಎಂದರೆ ಕನ್ನಡ ಕಿರುತೆರೆಯ ಸುಪ್ರಸಿದ್ಧ 16 ಸೂಪರ್ ಸ್ಟಾರ್ ಗಳು ಒಟ್ಟಿಗೆ ಒಂದೇ ವೇದಿಕೆ ಮೇಲೆ ಅಡುಗೆ ಮಾಡ್ತಾರೆ, ಆಟ ಆಡ್ತಾರೆ, ಕಾಲ್ ಎಳೆದು ಕಚಗುಳಿ ಇಟ್ಟು ಮಜಾ ಮಾಡ್ತಾರೆ ಒಟ್ನಲ್ಲಿ ಊಟ ಮತ್ತು ನಗುವಿನಿಂದ ನಿಮ್ಮ ಹೊಟ್ಟೆ ತುಂಬುಸ್ತಾರೆ.. ಕುಕ್ಕು ವಿಥ್ ಕಿರಿಕ್ಕು ಕಾರ್ಯಕ್ರಮದ ಹೆಸರೇ ಹೇಳುವಂತೆ ಇದು ಕುಕ್ಕು ಹಾಗೂ ಕಿರಿಕ್ಕು ಎಂಬ ಎರಡು ಗುಂಪುಗಳ ಜಂಟಿ ಕಾದಾಟ.. ಎಂಟು ಜನ ಕುಕ್ಕುಗಳು ಒಂದು ಕಡೆ ಆದರೆ, ಅವರ ಜೊತೆ ಕಲ್ಲನ್ನೂ ನಗಿಸಬಲ್ಲ ಎಂಟು ಜನ ಕಿರ್ರಿಕ್ಕು ಗಳ ಗುಂಪು ಇನ್ನೊಂದು.. ಪ್ರತಿ ಸಂಚಿಕೆಯಲ್ಲಿ ವಿಶಿಷ್ಟ ಆಯ್ಕೆಗಳ ಮೂಲಕ ಮಜವಾಗಿ ಒಬ್ಬ ಕುಕ್ಕು ಹಾಗೂ ಒಬ್ಬ ಕಿರಿಕ್ಕು ಜೋಡಿಯಾಗುತ್ತಾರೆ.. 
 
ಆಟಾನೇ ಇಷ್ಟು ಮಜಾ ಇದೆ ಅಂದಮೇಲೆ, ಆಟ ಆಡೋವ್ರು ಯಾರ್ ಯಾರು..?? 
ಮೊದಲಿಗೆ ಕುಕ್ಕು ವಿಥ್ ಕಿರ್ರಿಕ್ಕು ಕಾರ್ಯಕ್ರಮದ ಎಂಟು ಜನ ಕುಕ್ಕುಗಳು ಯಾರು ಅಂತ ನೋಡೋಣ.. ಕಿರುತೆರೆಯ ಧಾರಾವಾಹಿಗಳ ಫೇಮಸ್ ಫೇಸ್ ಸುಂದರ್ ವೀಣಾ, ಕನ್ನಡ ಹೋರಾಟಗಳಿಂದ ಹೆಸರಾದ ನಟ ನಿರೂಪಕ ಕಿರಿಕ್ ಕೀರ್ತಿ ಕುಕ್ಕುಗಳ , ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಹಿಳೆಯರ ಮನಗೆದ್ದ ಹ್ಯಾಂಡ್ಸಮ್ ಹೀರೋ, ಚಂದದ ನಾಯಕ ಚಂದನ್ , ಕರುನಾಡಿನ ಚಿನ್ನದಂತ ಚಂದನದ ಗೊಂಬೆ ಕವಿತಾ ಗೌಡ,  ಹಿರಿತೆರೆಯಿಂದ ಕಿರುತೆರೆವರೆಗೂ ವಯಸ್ಸೇ ಆಗದ ವನಿತಾ ವಾಸು, ಬಿಂದಾಸ್ ಸಿಂಗರ್, ಆಕ್ಟರ್ ರಾಕಿಂಗ್ ರೆಮೋ ಅಲಿಯಾಸ್ ರೇಖಾ ಮೋಹನ್, ಪಾತ್ರ ಮಾಡುತ್ತಿದ್ದರೂ ನಮ್ಮ ಪಕ್ಕದ ಮನೆಯವರೇ ಎನಿಸುವ ನಟಿ ಅಪೂರ್ವ, ಟಿವಿ ಸಿನಿಮಾ ಎಲ್ಲ ಕಡೆ ನಟಿಯಾಗಿ ಡ್ಯಾನ್ಸರ್ ಆಗಿ ಹೆಸರು ಮಾಡಿರುವ ಗ್ಲಾಮರ್ ಬೊಂಬೆ ಲಾಸ್ಯ ನಾಗರಾಜ್ ಖಡಕ್ ಕುಕ್ಕುಗಳಾಗಿ ನಿಮ್ಮ ಮುಂದೆ ಕೈರುಚಿ ಜೊತೆ ನಗುವಿನ ರುಚಿ ತೋರಿಸಲು ರೆಡಿಯಾಗಿದ್ದಾರೆ. 
ಅಬ್ಬಾ! ಇಷ್ಟೆಲ್ಲಾ ಪಟಿಂಗರ ಗುಂಪಾ ಅಂತ ಕೇಳೋರಿಗೆ, ಇದಿನ್ನೂ ಅರ್ಧ ಸಿನಿಮಾ ಅಷ್ಟೇ, ಮುಂದೆ ಬರ್ತಾರೆ ನೋಡಿ ಭಯಂಕರ ಕಿರಿಕ್ ಮಾಡೋ ಕಿರಿಕ್ಕುಗಳು..
 
ಕಿರಿಕ್ಕುಗಳ ಲಿಸ್ಟ್ ನೋಡಿದ್ರೆ ಈ ಕಾರ್ಯಕ್ರಮದಲ್ಲಿ ಸಿಗುವ ತರಲೆ ತುಂಟಾಟದ ಆಳ ಅಗಲ ನಿಮಗೆ ಆರ್ಥ ಆಗಲಿದೆ. ಎಲ್ಲಾ ಕಲೆಗಳಲ್ಲೂ ಕೈಚಳಕ ಮೆರೆದು ಬೆಳೆದಿರುವ ಅಪ್ಪಟ ದೇಸಿ ಪ್ರತಿಭೆ, ಕಲಾ ಸಾಗರ ಅರುಣ್ ಸಾಗರ್ ಕಿರಿಕ್ ಮಾಡ್ತೀನಿ ಅಂತ ನಿಂತಿದ್ದಾರೆ. ಜೊತೆಗೆ ಕಿರಿಕ್ ಅಂದ್ರೆ ನಾನು, ನಾನು ಅಂದ್ರೆ ಕಿರಿಕ್ ಅಂತ ಗೊತ್ತಿದ್ರೂ, ನಾನೇ ತುಂಬಾ ಒಳ್ಳೆ ಹುಡ್ಗ ಅಂತ ಪಟ್ಟ ತಗೊಂಡಿರೋ ಪ್ರಥಮ್, ಮಾತಲ್ಲೇ ಯಾರನ್ನ ಬೇಕಾದ್ರೂ ಹರಾಜ್ ಹಾಕೋ, ನಗುವಿನ ಮಲ್ಲಿ ನಯನ, ಬೆಳದಿಂಗಳ ಬಾಲೆಯ ಹಾಗಿರೋ ಮಿಲ್ಕಿ ಬೇಬಿ ಕಾರುಣ್ಯ ರಾಮ್, ಕನ್ನಡದ ಪಕ್ಕ ಲೋಕಲ್ ದೇಸಿ ಹುಡುಗ ಜಗ್ಗಪ್ಪ , ನಟಿ ನಿರೂಪಕಿ ಚೈತ್ರ ವಾಸುದೇವನ್ ಸುವರ್ಣ ವಾಹಿನಿಯ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಖ್ಯಾತಿಯ ಅಭಿಜ್ಞಾ ಭಟ್, ತಮ್ಮ ಹಾಸ್ಯಪ್ರಜ್ಞೆಗೆ ಹೆಸರಾದ ಮಸ್ತ್ ಮಜಾ ಕೊಡೊ ವಿಶ್ವ ಇವರೆಲ್ಲಾ ಕಿರಿಕ್ ಮಾಡಿ ನಗ್ಸಿ ಮಜಾ ಕೊಡೋಕೆ ಕಿರಿಕ್ಕು ಗಳ ಗುಂಪು ಕಟ್ಕೊಂಡ್ ಕಾಯ್ತಿದಾರೆ. 
 
ಅಯ್ಯೋ ದೇವ್ರೇ..! ಇವರೆಲ್ಲಾ ಒಟ್ಟಿಗೆ ಒಂದೇ ವೇದಿಕೇಲಿ ಬರ್ತಾರ ಅಂತ ಯೋಚಿಸ್ತಿದ್ರೆ? ಖಂಡಿತ ಹೌದು.. ಕಿಚ್ಚ ಸುದೀಪ್ ಸ್ಟಾರ್ ಎಂಟ್ರಿ ಕೊಟ್ಟು ಶುಭಾರಂಭ ಮಾಡಿರುವ, ಈ ಭಯಂಕರ ನಟರೆಲ್ಲಾ ಸೇರೋ ಭಾರಿ ಮನರಂಜನೆಯ ಭರ್ಜರಿ ವೇದಿಕೆ ಕುಕ್ಕು ವಿಥ್ ಕಿರಿಕ್ಕು ಕಾರ್ಯಕ್ರಮದ ಗ್ರಾಂಡ್ ಓಪನಿಂಗ್  ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಏಪ್ರಿಲ್ 10, ಶನಿವಾರ ರಾತ್ರಿ 8:30 ಕ್ಕೆ ಆರಂಭವಾಗಲಿದ್ದು, ನಂತರ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.. ಹೊಸಾ ಆಲೋಚನೆ, ಹೊಸಾ ವೇದಿಕೆ, ಹೊಸಾ ಕಾರ್ಯಕ್ರಮ, ಹೊಸಾ ಮನರಂಜನೆ, ಕನ್ನಡ ಕಿರುತೆರೆಯ ಮೊಟ್ಟ ಮೊದಲ ಹಾಗೂ ಅತಿದೊಡ್ಡ ಕಾಮಿಡಿ ಕುಕಿಂಗ್ ರಿಯಾಲಿಟಿ ಶೋ ಕುಕ್ಕು ವಿಥ್ ಕಿರಿಕ್ಕು..
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸ್ಟಾರ್ ಸುವರ್ಣ ವಾಹಿನಿಯಲ್ಲಿ ``ಕುಕ್ಕು ವಿಥ್ ಕಿರಿಕ್ಕು`` ಶೋ ಗೆ ಕುಕ್ಕಿಂಗ್ ಕಿಂಗ್ ಕಿಚ್ಚ ಸುದೀಪ್ - Chitratara.com
Copyright 2009 chitratara.com Reproduction is forbidden unless authorized. All rights reserved.