Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಿಶ್ವಿಕಾ ನಾಯ್ಡು ಗುರುಶಿಷ್ಯರು ಚಿತ್ರದ ನಾಯಕಿ
Posted date: 19 Wed, May 2021 12:44:23 PM
ಗುರುಶಿಷ್ಯರು ಚಿತ್ರ ಶುರುವಾದಾಗಿನಿಂದ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾವು ಅಭಾರಿಯಾಗಿದ್ದೇವೆ. ಇಷ್ಟು ದಿನ ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡುತ್ತಿರುವ ಕಲಾವಿದೆಯನ್ನು ನಾವು ಪರಿಚಯ ಮಾಡಿಕೊಟ್ಟಿರಲಿಲ್ಲ. ಇಂದು ಆ ಕಾಲ ಬಂದಿದೆ. 

ಅಮ್ಮ ಐ ಲವ್ ಯು, ಪಡ್ಡೆ ಹುಲಿ, ಜಂಟಲ್ಮನ್ ಮುಂತಾದ ಚಿತ್ರಗಳಲ್ಲಿ ಯಶಸ್ಸು ಪಡೆದ ನಿಶ್ವಿಕಾ ನಾಯ್ಡು ನಮ್ಮ ಗುರುಶಿಷ್ಯರು ಚಿತ್ರದ ನಾಯಕಿ. ನಿಶ್ವಿಕಾ ಅವರನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಸುಲಭವಾಗಿರಲಿಲ್ಲ. ನಾಯಕಿಯ ಆಯ್ಕೆ ಹೇಗಾಯಿತು ಅನ್ನೋ ವಿಷಯವನ್ನು ನಿಮಗೆ ಇದೊಂದು ಕಿರುನಾಟಕದ ಮೂಲಕ ನಿಮಗೆ ತಿಳಿಸುತ್ತಿದ್ದೇವೆ. 

30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ಗುರುಶಿಷ್ಯರು ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೂ ಈ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ಅವರನ್ನು ಆಯ್ಕೆ ಮಾಡಲಾಯಿತು. ಅದರ ಹೆಚ್ಚಿನ ವಿವರಗಳು ನಿಮಗೆ ಈ ಕಿರು ನಾಟಕದಲ್ಲಿ ಹೇಳಿದ್ದೇವೆ. 

ನಿಮಗೆ ತಿಳಿದಿರುವಂತೆ ಶರಣ್ ರವರು ಈ ಚಿತ್ರದಲ್ಲಿ ನಾಯಕ ನಟನಾಗಿ, ಒಬ್ಬ ದೈಹಿಕ ಶಿಕ್ಷಕನಾಗಿ ಪಾತ್ರವಹಿಸುತ್ತಿದ್ದಾರೆ. ಅವರ ಜೊತೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಪಾತ್ರ ಮಾಡಿದ್ದಾರೆ. ಗುರುಶಿಷ್ಯರು ಚಿತ್ರದ ಕಥೆ 1995 ರಲ್ಲಿ ನಡೆಯುವಂಥದ್ದು. 

ಈಗಾಗಲೇ ಚಿತ್ರದ 60% ಚಿತ್ರೀಕರಣ ಮುಗಿಸಿದ್ದೇವೆ. ಉಳಿದ ಭಾಗದ ಚಿತ್ರೀಕರಣ ಸದ್ಯದ ಕೋರೋನಾ ಲಾಕ್ಡೌನ್ ಮುಗಿದ ನಂತರ ಮಾಡಲು ಯೋಜಿಸಲಾಗಿದೆ. 

ಮಾಧ್ಯಮ ಮಿತ್ರರು ನಮ್ಮ ಚಿತ್ರದ ಮೇಲಿನ ಪ್ರೋತ್ಸಾಹ ಹೀಗೆ ಮುಂದುವರಿಸಲು ಕೇಳಿಕೊಳ್ಳುತ್ತೇವೆ. 

 *ಉಲ್ಲೇಖಗಳು 
ಶರಣ್: ನಾಯಕಿಯನ್ನು ಆಯ್ಕೆ ಮಾಡುವ ಸ್ಕಿಟ್ ತಯಾರು ಮಾಡುವುದು ಕೂಡ ಬಹಳ ಮಜವಾದ ಕೆಲಸವಾಗಿತ್ತು. ನಿಷಿಕ ಅವರು ತುಂಬಾ ಒಳ್ಳೆಯ ನಟಿ. ನಮ್ಮಿಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ. 

ಜಡೇಶ್ ಕುಮಾರ್: ನಿಶ್ವಿಕಾ ಇದೇ ಮೊದಲ ಬಾರಿಗೆ ಒಂದು ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿರುವುದು. 1995ರ ಕಾಲಘಟ್ಟ ವಾಗಿರುವುದರಿಂದ ಈಗಿನ ಪ್ರೇಕ್ಷಕರಿಗೂ ಬೇರೆಯೇ ರೀತಿಯಾದ ಅನುಭವ ಕೊಡುವಂತ ಸನ್ನಿವೇಶಗಳು ಘಟನೆಗಳು ಚಿತ್ರದಲ್ಲಿವೆ. 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಿಶ್ವಿಕಾ ನಾಯ್ಡು ಗುರುಶಿಷ್ಯರು ಚಿತ್ರದ ನಾಯಕಿ - Chitratara.com
Copyright 2009 chitratara.com Reproduction is forbidden unless authorized. All rights reserved.