Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಅಭಿನಯದ `ಸೀತಾಯಣ` ಇಂದಿನಿಂದ ತೆರೆಗೆ
Posted date: 27 Thu, May 2022 01:01:15 AM

ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲ ಬಾರಿ ಅಭಿನಯಿಸಿರುವ ಚಿತ್ರ ಸೀತಾಯಣ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದಗೊಂಡ ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾದ  ಕುರಿತಂತೆ ವಿವರ ನೀಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ರಾಜವರ್ಧನ್ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ ನನ್ನ ತಂದೆ ಹಾಗೂ ಶಶಿಕುಮಾರ್ ತುಂಬ ಆಪ್ತರು. ಚಿತ್ರದಲ್ಲಿ ಒಳ್ಳೆ ಅಂಶಗಳು ಇರಲಿದೆ. ಲವರ್ ಬಾಯ್ ಆಗಿದ್ದರೂ ಆಕ್ಷನ್ ಸೀನ್‌ದಲ್ಲಿ ಮಿಂಚಿದ್ದಾರಾ. ಎಲ್ಲದಕ್ಕಿಂತ ಹೆಚ್ಚಾಗಿ ಕಲಾವಿದರ ಮಕ್ಕಳು ಮೇಲಕ್ಕೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ನಾನು ನಟಿಸಿರುವ ಪ್ರಥಮ ಚಿತ್ರಕ್ಕೆ ಅಪ್ಪು ಸರ್ ಹಾಡಿರೋದು ನನ್ನ ಪುಣ್ಯ ಎನ್ನಬಹುದು. ಅಪ್ಪ ಒಳ್ಳೆ ಡ್ಯಾನ್ಸರ್ ಆಗಿದ್ದರು. ಆದರೆ ಇದರಲ್ಲಿ ನಾನು ಡ್ಯಾನ್ಸ್ ಮಾಡಿಲ್ಲ. ಮುಂದಿನ ಚಿತ್ರದಲ್ಲಿ ಖಂಡಿತ ಮಾಡುವೆ. ಶಿವರಾಜ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರೆ, ಉಪೇಂದ್ರ ಅವರು ಹಾಡನ್ನು ಅನಾವರಣಗೊಳಿಸಿದರು. ರಶ್ಮಿಕಾಮಂದಣ್ಣ ಮತ್ತೋಂದು ಗೀತೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ೨೦೧೯ರಲ್ಲಿ ಶುರುವಾಗಿ ೨೦೨೦ರಲ್ಲಿ ಮುಗಿಯಿತು. ಕರೋನ ಕಾರಣದಿಂದ ತಡವಾಗಿದೆ. ಪ್ರೀತಿಯ ಕಥೆ ಆದರೂ ವಿರಾಮದ ನಂತರ ಥ್ರಿಲ್ಲರ್ ಅಂಶಗಳು ಬರಲಿದ್ದು, ಸಾಕಷ್ಟು ತಿರುವುಗಳಿಂದ ಕೂಡಿದೆ. ಮದ್ಯಮ ವರ್ಗದ ಹುಡುಗನಾಗಿ ಸಮಸ್ಯೆಯಲ್ಲಿ ಸಿಲುಕಿದಾಗ ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾನೆ ಎನ್ನುವ ಪಾತ್ರವಾಗಿದೆ. ಮಾತೃಭಾಷೆ ಕನ್ನಡವಾಗಿರುವುದರಿಂದ ಮೊದಲು ಇಲ್ಲಿ ರಿಲೀಸ್ ಮಾಡಿ ಮುಂದಿನ ದಿನಗಳಲ್ಲಿ ತೆಲುಗುದಲ್ಲಿ ಬರಲಿದೆ ಎಂಬುದಾಗಿ  ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿದರು.

ರಾಮಾಯಣದಲ್ಲೂ ನಾಯಕ, ನಾಯಕಿ ಖಳನಾಯಕ ಇದ್ದಂತೆ ಇದರಲ್ಲೂ ಅದೆಲ್ಲವೂ ಇದೆ. ಅದಕ್ಕಾಗಿ ಸೀತಾಯಣ ಹೆಸರನ್ನು ಇಡಲಾಗಿದೆ. ಮಂಗಳೂರು, ಆಗುಂಬೆ, ವೈಜಾಕ್, ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಲಲಿತಾರಾಜಲಕ್ಷೀ ಬಂಡವಾಳ ಹೂಡಿದ್ದಾರೆ ಅಂತ ರಚಿಸಿ ನಿರ್ದೇಶನ ಮಾಡಿರುವ ಪ್ರಭಾಕರ್‌ಆರಿಪ್ಕಾ ಮಾಹಿತಿ ನೀಡಿದರು. 

ಕವಿರಾಜ್ ಮತ್ತ ಗೌಸ್‌ಪೀರ್ ಸಾಹಿತ್ಯದ ಹಾಡುಗಳಿಗೆ ಪದ್ಮನಾಭ ಭಾರದ್ವಾಜ್ ಸಂಗೀತ ಒದಗಿಸಿದ್ದಾರೆ. ಛಾಯಾಗ್ರಹಣ ದುರ್ಗಪ್ರಸಾದ್‌ಕೊಲ್ಲಿ, ಸಂಕಲನ ಪ್ರವೀಣ್‌ಪುಡಿ ಅವರದಾಗಿದೆ. ಇದಕ್ಕೂ ಮುನ್ನ ಟ್ರೇಲರ್ ಮತ್ತು ಪುನೀತ್‌ರಾಜ್‌ಕುಮಾರ್ ಹಾಡಿರುವ ಯಾರು ನೀನು ಯಾರು, ಹರಿವ ನದಿಗೆ ಎದುರು ನಾನು ಈಜಿರುವೆ ವಿಡಿಯೋ ಗೀತೆಯನ್ನು ತೋರಿಸಲಾಯಿತು. 


 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಅಭಿನಯದ `ಸೀತಾಯಣ` ಇಂದಿನಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.